ಈ ವರ್ಷ ದೀಪಾವಳಿ ಆಚರಿಸಲು ಸಂಗ್ರಹವಾದ ಸುಮಾರು 4.25 ಲಕ್ಷ ರೂ.ವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದು, ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೆ ನೆರವು ನೀಡಲು ನಿರ್ಧರಿಸಿದೆ.
ಎಂ-ಪೂರ್ವ ವಾರ್ಡಿನ ಕಚೇರಿ ಸಿಬ್ಬಂದಿ ದೀಪಾವಳಿ ಆಚರಣೆಗೆ ಸಂಗ್ರಹಿಸಿದ ಸಂಪೂರ್ಣ ಹಣವನ್ನು ಸಿಎಂ ನಿಧಿಗೆ ನೀಡುತ್ತಿದ್ದಾರೆ. 'ಗೋವಂಡಿಯಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಆಗಮಿಸಲಿದ್ದು, ಅಲ್ಲಿ ಅವರಿಗೆ ಈ ಹಣವನ್ನು ಹಸ್ತಾಂತರಿಸಲಾಗುತ್ತದೆ,' ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚುತ್ತಿದೆ ಆತ್ಮಹತ್ಯೆ:
ಮಹಾರಾಷ್ಟ್ರದಲ್ಲಿ ರೈತ ಆತ್ಮಹತ್ಯೆಗಳು ಅತೀವ ಹೆಚ್ಚುತ್ತಿದ್ದು, ಈ ವರ್ಷದ ಜನವರಿಯಿಂದ ಜೂನ್ ಅವಧಿಯಲ್ಲಿ 1,300 ರೈತರು ಸಾವಿಗೆ ಶರಣಾಗಿದ್ದಾರೆಂದು ರಾಜ್ಯ ಕಂದಾಯ ಇಲಾಖೆ ಅಂಕಿ ಸಂಖ್ಯೆಗಳು ಹೇಳುತ್ತಿವೆ. ಆರು ತಿಂಗಳಲ್ಲಿಯೇ ರೈತ ಆತ್ಮಹತ್ಯೆಗಳ ಸಂಖ್ಯೆ ಶೇ.66 ರಷ್ಟು ಹೆಚ್ಚಾಗಿದ್ದು, 2014ರಲ್ಲಿ ಒಟ್ಟು 1,981 ರೈತರು ಆತ್ಮಹತ್ಯೆ ಮಾಡಿಕೊಂರಡರೆ, 2013ರಲ್ಲಿ ಈ ಸಂಖ್ಯೆ 1,296 ಆಗಿತ್ತು.
'ನಮಗೆ ಅನ್ನ ನೀಡುವ ರೈತ ಆತ್ಮಹತ್ಯೆಗೆ ಶರಣಾಗುತ್ತಿರುವುದು ತೀವ್ರ ದುಃಖ ತರುವ ವಿಷಯವಾಗಿದೆ. ಅದಕ್ಕೆ ದೀಪಾವಳಿ ಆಚರಣೆಗೆ ಸಂಗ್ರಹವಾದ ಹಣವನ್ನು ಅವರ ಕ್ಷೇಮಾಭಿವೃದ್ಧಿಗೆ ಮೀಸಲಿಡುತ್ತಿದ್ದೇವೆ,' ಎನ್ನುತ್ತಾರೆ ಎಂ-ಪೂರ್ವ ವಾರ್ಡ್‌ನ ಉಪವಿಭಾಗಿಧಿಕಾರಿ ಕಿರಣ್ ದಿಘವಂಕರ್.
ಮುಂಬಯಿ: ದೇಶೆದೆಲ್ಲೆಡೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ಅನ್ನದಾತನ ನೋವಿಗೆ ಸ್ಪಂದಿಸುವ ಹೃದಯಗಳು ಅಗತ್ಯವಿದೆ. ಈ ನಿಟ್ಟಿನಲ್ಲಿ ಬಾಂಬೆ ಮುನ್ಸಿಪಲ್ ಕಾರ್ಪೋರೇಷನ್‌ನ ವಾರ್ಡ್ ಕಚೇರಿಯೊಂದು ವಿಶೇಷ ನಿರ್ಧಾರವನ್ನು ತೆಗೆದುಕೊಂಡಿದೆ.