''ತೀರ್ಪುಗಳ ವಿಚಾರ ಏನಾಗುತ್ತೋ ಏನೋ. ಐದು... ಐದು.. ಹೀಗೇ ಸೇರಿಸುತ್ತಾ ಹೋದರೆ 10ರಿಂದ 15 ವರ್ಷಗಳವರೆಗೂ ಹೋಗುತ್ತದೆ. ಇದೇ ನನಗೆ ಮತ್ತು ನನ್ನ ಪೋಷಕರ ಕೊರೆಯುತ್ತಿರುವ ಅತಿ ದೊಡ್ಡ ವಿಚಾರ. ಇದು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿಲ್ಲ; ಬದಲು ಹೈಕೋರ್ಟ್‌ನಲ್ಲಿದೆ. ಈ ತೀರ್ಪಿನ ನಂತರ ನನ್ನ ಬದುಕಿನ ಹಾದಿ ಹೇಗಿರುತ್ತದೋ ಹಾಗೇ ಸ್ವೀಕರಿಸುತ್ತೇನೆ,'' ಎಂದು ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ತಮ್ಮ ಮನದಾಳ ತೋಡಿಕೊಂಡಿದ್ದಾರೆ.
ಸಧ್ಯ ಸಲ್ಮಾನ್ ಖಾನ್, ಮುಂಬೈ ನ್ಯಾಯಾಲಯದಲ್ಲಿ 2002ರ ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ಕೊಲೆಗೆ ಸಮಾನವಲ್ಲದ ಆದರೆ ದಂಡನೀಯ ನರಹತ್ಯೆಯ ಅಪರಾಧಿ ಎಂದು ಮೇ 6ರಂದು ನ್ಯಾಯಾಲಯ ತೀರ್ಪು ನೀಡಿದೆ.
2002 ಸೆಪ್ಟೆಂಬರ್ 28ರಂದು ಮುಂಬಯಿ ಬಾಂದ್ರಾದ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಟಯೋಟಾ ಲ್ಯಾಂಡ್ ಕ್ರೂಸರ್ ಹರಿಸಿ ಅಲ್ಲಿಂದ ಪರಾರಿಯಾಗಿದ್ದರು ಎಂಬ ಆರೋಪ ಇವರ ಮೇಲಿದೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು.
''ನನ್ನ ವೃತ್ತಿ ಎಂಥದ್ದು ಎಂದರೆ, ನೀವು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೀರಿ ಎನ್ನುವುದು ಇಲ್ಲಿ ಮುಖ್ಯವೇ ಅಲ್ಲ. ಜನ ಸೂಕ್ಷ್ಮತೆ ಕಳೆದುಕೊಂಡಿದ್ದಾರೆ. ಅವರಿಗೇನು... ಸೋನಮ್ ಜತೆ ರೊಮ್ಯಾನ್ಸ್ ಮಾಡ್ತಾರೆ, ಜಾಕ್ವೆಲಿನ್ ಜತೆ ಡಾನ್ಸ್ ಆಡ್ತಾರೆ, ಶೂಟಿಂಗ್‌ಗೆ ವಿದೇಶಗಳಿಗೆ ಹೋಗ್ತಾರೆ, 600 ಕೋಟಿ ಭರ್ಜರಿ ಆದಾಯವೂ ಬಂದಿದೆ ಅಂತ ಮಾತಾಡಿಕೊಳ್ತಾರೆ. ಆದರೆ ಅದರಲ್ಲಿ ನಮ್ಮ ಕೈ ಸೇರುವುದೆಷ್ಟು ಅಂತ ಅವರಿಗೇನು ಗೊತ್ತು. ಕೇಸ್ ಇದ್ದರೂ ಅವರೆಷ್ಟು ಎಂಜಾಯ್ ಮಾಡ್ತಿದಾರೆ ನೋಡಿ ಎಂದು ಜನ ಆಡಿಕೊಳ್ತಾರೆ,'' ಎಂದು ಸಲ್ಮಾನ್ ಬೇಸರದಿಂದ ಹೇಳುತ್ತಾರೆ.
''ಎಲ್ಲಾ ವಿಚಾರಗಳೂ ನನ್ನ ವಿರುದ್ಧ ತಿರುಗಿ ಬಿದ್ದಿವೆ. ನನ್ನ ವಿರುದ್ಧ ತೀರ್ಪು ಬರೆಯುವವರಿಗೆ ನನ್ನ ಒಳ್ಳೆಯ ಕೆಲಸಗಳೂ ವಿರುದ್ಧವಾಗಿಯೇ ಕಾಣಿಸುತ್ತಿವೆ,'' ಎಂದು ಸಲ್ಮಾನ್ ಹೇಳಿದರು.
ಬ್ಲಾಕ್‌ಬಕ್ ಪಕ್ಷಿಯ ಬೇಟೆಯಾಡಿದ ಆರೋಪದ ಮೇಲೆ ಒಂದು ವರ್ಷ ಜೈಲುವಾಸದ ಶಿಕ್ಷೆಯೂ ಘೋಷಣೆಯಾಗಿದೆ. ಆದರೆ ಉನ್ನತ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಕೇಸ್ ಸಂಬಂಧ ಇವರು ಜೋಧ್‌ಪುರ ಜೈಲಿನಲ್ಲಿ ಮೂರು ದಿನ ಸೆರೆವಾಸ ಅನುಭವಿಸಿಯೂ ಬಂದಿದ್ದಾರೆ. ಸಲ್ಮಾನ್ ಖಾನ್ ನಟಿಸಿರುವ ಪ್ರೇಮ್ ರತನ್ ಧನ್ ಪಾಯೋ ಚಿತ್ರ ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವ ಸಂಭವವಿದೆ.
ಮುಂಬಯಿ: ಸಲ್ಮಾನ್ ಖಾನ್, ಬಾಲಿವುಡ್ ಚಿತ್ರೋದ್ಯಮದ ಒಬ್ಬ ಯಶಸ್ವಿ ನಾಯಕ ನಟ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಈತನ ಪ್ರತಿಯೊಂದು ಚಿತ್ರವೂ ದಾಖಲೆ ನಿರ್ಮಿಸುತ್ತಲೇ ಸಾಗಿದೆ. ಬಹುದೊಡ್ಡ ಅಭಿಮಾನಿ ಬಳಗವೇ ಇವರ ಹಿಂದಿದೆ. ಹಾಗಿದ್ದೂ ಸಲ್ಮಾನ್ ನೆಮ್ಮಿದಿಯಾಗಿಲ್ಲ. ಕಾರಣ, ಇವರ ತಲೆ ಕೊರೆಯುತ್ತಿರುವ ನ್ಯಾಯಾಲಯಗಳ ತೀರ್ಪು.