Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Viewing all articles
Browse latest Browse all 12761

ಬಿಹಾರ ಸಮರ:ಶೇ 57ರಷ್ಟು ಮತದಾನ

$
0
0

4ನೇ ಹಂತದಲ್ಲಿ ಶೇ. 57.59 ಮತದಾನ, ಇನ್ನುಳಿದಿರುವುದು ಒಂದೇ ಹಂತ

ಪಟನಾ: ಬಿಹಾರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾನುವಾರ 55 ಕ್ಷೇತ್ರಗಳಲ್ಲಿ ನಡೆದ ನಾಲ್ಕನೇ ಹಂತದ ಮತದಾನದಲ್ಲಿ ಶೇ. 57.59ಮಂದಿ ಮತ ಚಲಾಯಿಸಿದ್ದಾರೆ.

14, 139 ಮತಗಟ್ಟೆಗಳಲ್ಲಿ ಬಿಗಿ ಭದ್ರತೆಯ ನಡುವೆ ಜನ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಸುಮಾರು 1. 46 93, 294 ಕೋಟಿ ಮತದಾರರು ಭಾಗವಹಿಸಿದ್ದರು. ವಿದ್ಯುನ್ಮಾನ ಮತಪೆಟ್ಟಿಗೆಯಲ್ಲಿ 57 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 776 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.

2010ರಲ್ಲಿ ನಡೆದ ಚುನಾವಣೆಯಲ್ಲಿ ಈ 55 ಸೀಟುಗಳ ಪೈಕಿ ಬಿಜೆಪಿ ಪಕ್ಷವು 26 ಸ್ಥಾನಗಳನ್ನು ಗೆದ್ದಿತ್ತು. ಜೆಡಿಯು 24 ಸ್ಥಾನಗಳಲ್ಲಿ ಜಯಶಾಲಿಯಾಗಿತ್ತು. ಇನ್ನುಳಿದಂತೆ ಆರ್‌ಜೆಡಿ 2 ಸೀಟು ಮತ್ತು ಪಕ್ಷೇತರರು ಒಂದು ಸೀಟು ಗೆದ್ದಿದ್ದರು.


Viewing all articles
Browse latest Browse all 12761


<script src="https://jsc.adskeeper.com/r/s/rssing.com.1596347.js" async> </script>