Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Viewing all articles
Browse latest Browse all 12761

ಕಲ್ಯಾಣ್ ಕುಮಾರ್ ಮೊಮ್ಮಗನ ಪಟ್ಟಾಭಿಷೇಕ

$
0
0

ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಹೆಸರುಗಳು ಕನ್ನಡ ಚಿತ್ರರಂಗದಲ್ಲಿ ಅಜರಾಮರ. ಕಲ್ಯಾಣ್ ಕುಮಾರ್ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗದ ಕಡೆ ಬಂದಿರಲಿಲ್ಲ. ಈಗ ಕಲ್ಯಾಣ್ ಕುಮಾರ್ ಮೊಮ್ಮಗ ಯುವರಾಜ್ ಕಲ್ಯಾಣ್ ಕುಮಾರ್ ಪಟ್ಟಾಭಿಷೇಕ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಲು ಹೊರಟಿದ್ದಾರೆ.

ಮೆಕಾನಿಕಲ್ ಇಂಜಿನಿಯರಿಂಗ್ ಓದಿಕೊಂಡಿರುವ ಯುವರಾಜ್ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಒಳ್ಳೆ ಸ್ಯಾಲರಿ ಇತ್ತು. ಆದರೆ ಚಿತ್ರದಲ್ಲಿ ನಾಯಕನಾಗಲು ಅವಕಾಶ ಬಂದಾಗ ಕೆಲಸಕ್ಕೆ ಗುಡ್ ಬೈ ಹೇಳಲೇಬೇಕಾಯಿತು. . ಆದರೆ ಫ್ಯಾಮಿಲಿಯಲ್ಲಿ ಯುವರಾಜ್ ಚಿತ್ರರಂಗಕ್ಕೆ ಬರುವುದು ಇಷ್ಟ ಇರಲಿಲ್ಲ. ಆದರೂ ಅವರು ಫ್ಯಾಮಿಲಿಯನ್ನು ಕನ್‌ವಿನ್ಸ್ ಮಾಡುವಲ್ಲಿ ಯಶಸ್ವಿಯಾದರು. ಕಲ್ಯಾಣ್ ಕುಮಾರ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಅವರ ಮುಂದಿನ ತಲೆ ಮಾರು ಚಿತ್ರರಂಗಕ್ಕೆ ಪ್ರವೇಶ ಪಡೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಯುವರಾಜ್ ಕಾಲೇಜು ಮುಗಿಸಿದ ನಂತರವೇ ಪೂರ್ವ ತಯಾರಿ ಮಾಡಿಕೊಂಡು ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಅವರ ತಾತ ಕಲ್ಯಾಣ್ ಕುಮಾರ್ ಅವರ ಹೆಸರೇ ಗಾಡ್‌ಫಾದರ್‌ನಂತೆ ಕೆಲಸ ಮಾಡುತ್ತಿದೆಯಂತೆ. ಅವರ ನೆನಪಿನಲ್ಲೇ ಚಿತ್ರರಂಗಕ್ಕೆ ಬಂದಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ರೂಪುಗೊಳ್ಳಲಿ.


Viewing all articles
Browse latest Browse all 12761


<script src="https://jsc.adskeeper.com/r/s/rssing.com.1596347.js" async> </script>