ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಾಥ್ ನೀಡಿದ್ದು, ಅದರ ನೆರವಿನೊಂದಿಗೆ ಆತ ಪಾಕಿಸ್ತಾನದಲ್ಲೇ ವಾಸವಾಗಿದ್ದಾಣೆ ಎಂದು ಬಂಧಿತ ಛೋಟಾರಾಜನ್ ಬಾಯ್ಬಿಟ್ಟಿದ್ದಾನೆ.
ಇಂಡೋನೇಷ್ಯಾಗೆ ತೆರಳಿರುವ ಸಿಬಿಐ ತಂಡವು ರಾಜನ್‌ನನ್ನು ಮೊದಲಬಾರಿಗೆ ಸೋಮವಾರ ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ಆತ ದಾವೂದ್ ನೆಲೆಯ ವಿಷಯವನ್ನು ಹೊರಹಾಕಿದ್ದಾನೆ.
ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇರುವ ಬಗ್ಗೆ ಛೋಟಾ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನ ಸೇನೆ ದಾವೂದ್ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿದೆ.
ದಾವೂದ್ ಇಬ್ರಾಹಿಂನ ಕರಾಚಿ ಹಾಗೂ ಇಸ್ಲಾಮಾಬಾದ್ ಮನೆಗಳ ಬಳಿ ಪಾಕ್ ಸೇನೆ ವಿಶೇಷ ಕಮ್ಯಾಂಡೋಗಳನ್ನು ನಿಯೋಜಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಅನಾರೋಗ್ಯಪೀಡಿತನಾಗಿರುವ ದಾವೂದ್‌ಗೆ ಕರಾಚಿಯ ಝಿಯಾವುದ್ದೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲೂ ಸಹ ಭಾರಿ ಭದ್ರತೆ ಏರ್ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
↧
ದಾವೂದ್‌ಗೆ ಪಾಕ್‌ನಲ್ಲಿ ವಿಐಪಿ ಭದ್ರತೆ
↧