ಹೊಸದಿಲ್ಲಿ: ಐಪಿಎಲ್ ಮಾಜಿ ಮುಖ್ಯಸ್ಥ ಕಳಂಕಿತ ಲಲಿತ್ ಮೋದಿ ಮತ್ತು ಅವರ ಸಹಚರರ ವಿರುದ್ಧ ಕೇಳಿಬರುತ್ತಿರುವ 12ಕ್ಕೂ ಹೆಚ್ಚು ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪದಡಿ ಅಂತಿಮ ಪೆನಲ್ಟಿ ನೋಟಿಸ್ ನೀಡಲು ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸಿದೆ.
ಲಲಿತ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡುವ ಅಧಿಕೃತ ಸೂಚನೆಗಾಗಿ ಜಾರಿ ನಿರ್ದೇಶಾನಲಯುವು ಕಾಯುತ್ತಿದ್ದು, ಅವರನ್ನು ವಿಚಾರಣೆಗಾಗಿ ಬ್ರಿಟನ್‌ನಿಂದ ಭಾರತಕ್ಕೆ ಕರೆತರುವಂತೆ ಕೇಂದ್ರ ಗೃಹ ಹಾಗೂ ವಿದೇಶಾಂಗ ಸಚಿವಾಲಯದ ಬಳಿ ಮನವಿ ಮಾಡಲಿದೆ.
2008ರಲ್ಲಿ ಲಲಿತ್ ಅವರು 20 ಓವರ್‌ಗಳ ಹೊಸ ಮಾದರಿಯ ಕ್ರಿಕೆಟ್ ಪಂದ್ಯಾಟವನ್ನು 'ಇಂಡಿಯನ್ ಪ್ರೀಮಿಯರ್ ಲೀಗ್' ಹೆಸರಲ್ಲಿ ಶುರುಮಾಡಿದ್ದರು. 3 ವರ್ಷ ಐಪಿಎಲ್ ಮುಖ್ಯಸ್ಥರಾಗಿ ಅದನ್ನು ಮುನ್ನಡೆಸಿದ್ದ ಲಲಿತ್ ಮೋದಿ ವಿರುದ್ಧ ಬಳಿಕ ಹಣಕಾಸಿನ ದುರ್ಬಳಕೆ ಆರೋಪಗಳು ಕೇಳಿಬಂದಿದ್ದವು. ಅವರೀಗ ಲಂಡನ್‌ನಲ್ಲಿ ನೆಲೆಸಿದ್ದಾರೆ.
↧
ಲಲಿತ್ ಮೋದಿಗೆ ಫೈನಲ್ ನೋಟಿಸ್
↧