ಭೋಪಾಲ್: ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದದ ಕೇಂದ್ರಬಿಂದುವಾಗುವ ಮಧ್ಯಪ್ರದೇಶದ ಪಶು ಸಂಗೋಪನೆ ಸಚಿವೆ ಕುಸುಮ್ ಮೆಹೆದೆಲೆ, ಭಿಕ್ಷೆ ಬೇಡಿದ ಪುಟ್ಟ ಬಾಲಕನನ್ನು ಒದೆಯುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಭಾನುವಾರ ಸಚಿವರ ಪನ್ನಾ ಭೇಟಿಯ ಸಂದರ್ಭದಲ್ಲಿ 1 ರೂ. ಬೇಡಿದ ಹುಡುಗನನ್ನು ಕುಸುಮ್ ಒದ್ದು ದೂರ ತಳ್ಳಿದ್ದಾರೆ. ತಕ್ಷಣವೇ ಆಕೆಯ ಬೆಂಗಾವಲು ಪಡೆ ಸಿಬ್ಬಂದಿ ಕೂಡಾ ಹುಡುಗನನ್ನು ಥಳಿಸಿದ್ದಾರೆ. ಅವರ ಈ ವರ್ತನೆ ಮಾಧ್ಯಮದವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಆಕೆ ಮಾತ್ರ ಈ ವಿಷಯವಾಗಿ ಮಾತನಾಡಲು ತಿರಸ್ಕರಿಸಿದ್ದಾರೆ. ಮಕ್ಕಳ ಹಕ್ಕು ರಕ್ಷಣಾ ಕಾರ್ಯಕರ್ತರು ಹಾಗೂ ಪ್ರತಿಪಕ್ಷಗಳು ಕುಸುಮ್ ರಾಜಿನಾಮೆಗೆ ಪಟ್ಟು ಹಿಡಿದಿವೆ.
ಈ ಹಿಂದೆ ಹುಲಿ, ಎಸಿ ಸರಿಯಿಲ್ಲದೆ ತನಗೆ ನಿದ್ದೆ ಬರಲಿಲ್ಲ ಎಂದು ಇಬ್ಬರು ಪಿಡಬ್ಲೂಡಿ ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ, ಸಿಂಹವನ್ನು ಸಾಕುಪ್ರಾಣಿಗಳಾಗಿಸಬೇಕು ಎನ್ನುವ ಮೂಲಕ ಕುಸುಮ್ ವಿವಾದಕ್ಕೀಡಾಗಿದ್ದರು.
↧
1 ರೂ. ಬೇಡಿದ ಬಾಲಕನಿಗೆ ಒದ್ದ ಸಚಿವೆ!
↧