Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Viewing all articles
Browse latest Browse all 12761

ಬಿಜೆಪಿ ಸೋತರೆ ಪಾಕ್‌ನಲ್ಲಿ ಪಟಾಕಿ ಸಿಡಿಯುತ್ತದೆ: ಅಮಿತ್ ಷಾ

$
0
0

ಚುನಾವಣಾ ರ‌್ಯಾಲಿಯಲ್ಲಿ ಅಮಿತ್ ಷಾ ಹೇಳಿಕೆ
ರಕ್ಸಾಲ್ (ಬಿಹಾರ): ಬಿಹಾರ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿಗೆ ಸೋಲಾದರೆ ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುತ್ತವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಈ ಮೂಲಕ ಚುನಾವಣೆ ಪ್ರಚಾರದಲ್ಲಿ ಕೋಮು ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ಬಿಹಾರದ ರಕ್ಸಾಲ್‌ನಲ್ಲಿ ಗುರುವಾರ ಚುನಾವಣಾ ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್‌ಷಾ , ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುವುದು ನಿಮಗೆ ಇಷ್ಟಾನಾ ಎಂದು ಜನರನ್ನು ಪ್ರಶ್ನಿಸಿ, ಹಾಗಾಗಬಾರದು ಎಂದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮತ ಹಾಕಿ ಎಂದು ಕೋರಿದರು.

''ಜಂಗಲ್ ರಾಜ್-2 ಮತ್ತೆ ಬರುವುದು ನಿಮಗಿಷ್ಟನಾ? ಬಿಹಾರ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಸೋತರೆ, ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುತ್ತವೆ,'' ಎಂದು ಪರೋಕ್ಷ ವಾಗಿ ಅಲ್ಪಸಂಖ್ಯಾತರತ್ತ ಬೊಟ್ಟು ಮಾಡಿದರು.

ಒಂದು ವೇಳೆ ಮಹಾಮೈತ್ರಿ ಗೆಲುವು ಸಾಧಿಸಿದರೆ ಸಧ್ಯ ಜೈಲಿನಲ್ಲಿರುವ ಆರ್‌ಜೆಡಿ ಮುಖಂಡ ಮೊಹಮ್ಮದ್ ಷಹಾಬುದ್ದೀನ್‌ನಂತಹ ''ದರೋಡೆಕೋರರು''ಸಂಭ್ರಮಪಡುತ್ತಾರೆ ಎಂದು ವ್ಯಂಗ್ಯವಾಡಿದರು.

ಹಿಂದುಳಿದವರು ಮತ್ತು ದಲಿತರಿಗೆ ಸೇರಬೇಕಾದ ಮೀಸಲಾತಿಯ ಒಂದುಷ್ಟು ಭಾಗವನ್ನು ಅಲ್ಪಸಂಖ್ಯಾತರಿಗೆ ನೀಡಲು ಮಹಾಮೈತ್ರಿ ಪಕ್ಷಗಳು ಸಂಚು ರೂಪಿಸಿವೆ ಎಂದೂ ಅಮಿತ್‌ಷಾ ಆರೋಪಿಸಿದರು.


Viewing all articles
Browse latest Browse all 12761


<script src="https://jsc.adskeeper.com/r/s/rssing.com.1596347.js" async> </script>